೧. ವಿಭಾಗದ ಪರಿಚಯ:
ಜೀವ ರಸಾಯನಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ರೋಗಿಗಳಿಗೆ ಉನ್ನತ ಮಟ್ಟದ ಸೇವೆಗಳನ್ನು ನೀಡಲು ಕಟಿಬದ್ಧವಾಗಿದ್ದು ಉತ್ತಮ ದರ್ಜೆಯ ಸಂಶೋಧನೆಗೆ ಒತ್ತುನೀಡಲಾಗುತ್ತಿದೆ.
ಮೊದಲನೇ ವರ್ಷದ ವೈದ್ಯಕೀಯ, ಅರೆವೈದ್ಯಕೀಯ ಮತ್ತು ಶುಶ್ರೂಷಕ ವಿದ್ಯಾರ್ಥಿಗಳಿಗೆ ಜೀವ ರಸಾಯನ ಶಾಸ್ತ್ರ ವಿಷಯವನ್ನು ಬೋಧಿಸಲಾಗುತ್ತದೆ. ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಮಾನವ ದೇಹದ ಜೀವ ಕೋಶಗಳಲ್ಲಿ ಆಗುವ ರಾಸಾಯನಿಕ ಕ್ರಿಯೆಗಳ ಬಗ್ಗೆ ಹಾಗೂ ರೋಗಸಮಯದಲ್ಲಿ ದೇಹದ ಜೀವ ಕೋಶಗಳಲ್ಲಿ ಆಗುವ ರಾಸಾಯನಿಕ ಬದಲಾವಣೆ ಬಗ್ಗೆ ತಿಳಿಸಿ ಕೊಡಲಾಗುತ್ತದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಬೋಧನಾ ತರಗತಿ, ಪ್ರಾಯೋಗಿಕ ತರಗತಿ, ಸೆಮಿನಾರ್, ಗುಂಪು ಚರ್ಚೆ, ಸಂಯೋಜಿತ ಬೋಧನಾ ತರಗತಿಗಳು ಒಳಗೊಂಡಿದ್ದು, ಇದರ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯನ್ನು ಅಳೆಯಲಾಗುತ್ತದೆ.
ಪ್ರಯೋಗಶಾಲಾ ಸೇವೆಗಳು ಪ್ರಸ್ತುತ ವೈದ್ಯಕೀಯ ಪದ್ಧತಿಯಲ್ಲಿ ವೈದ್ಯರಿಗೆ ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ನಿರ್ಧರಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿವೆ ಹಾಗೂಆಸ್ಪತ್ರೆ ಸೇವೆಗಳಲ್ಲಿ ಕೇಂದ್ರಸ್ಥಾನ ಪಡೆದಿವೆ. ಜೀವ ರಸಾಯನ ಶಾಸ್ತ್ರ ವಿಭಾಗವು ಆಸ್ಪತ್ರೆ ಪ್ರಯೋಗಾಲಯದಲ್ಲಿ ಡಯಗ್ನೋಸ್ಟಿಕ್ ಸೇವೆಗಳನ್ನು ಅಹೋರಾತ್ರಿ ನೀಡುತ್ತಿದೆ.ಇದರಿಂದ ವೈದ್ಯರುಗಳಿಗೆ ರೋಗ ಪತ್ತೆ ಹಚ್ಚಿ ರೋಗಿಗಳನ್ನು ಉಪಚರಿಸಲು ಸಹಾಯವಾಗುತ್ತಿದೆ. ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಚಟುವಟಿಕೆಗಳು ಅವಿಭಾಜ್ಯ ಅಂಗವಾಗಿದ್ದು ವಿಭಾಗದ ಬೋಧಕ ಸಿಬ್ಬಂದಿಯವರು, ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇದುವರೆಗೆ ಇಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರುತ್ತಾರೆ.
ಜೀವರಸಾಯನಶಾಸ್ತ್ರ ವಿಭಾಗವು ಸುಸಜ್ಜಿತವಾದ ಸಂಶೋಧನಾ ಪ್ರಯೋಗಾಲಯ, ವಿದ್ಯಾರ್ಥಿಗಳ ಪ್ರಯೋಗ ಶಾಲೆ, ನಿರೂಪಣಾ ಕೊಠಡಿ ಹಾಗೂ ಗ್ರಂಥಾಲಯವನ್ನು ಹೊಂದಿರುತ್ತದೆ.
ಜೀವರಸಾಯನ ಶಾಸ್ತ್ರ ವಿಭಾಗ

ವಿದ್ಯಾರ್ಥಿಗಳ ಪ್ರಯೋಗಾಲಯ

ಸಂಶೋಧನಾ ಪ್ರಯೋಗಾಲಯ

ವಿಭಾಗದ ಗ್ರಂಥಾಲಯ

ಜೀವರಸಾಯನ ಶಾಸ್ತ್ರ ವಿಭಾಗದಲ್ಲಿ ಅತ್ಯುತ್ತಮವಾದ ನವೀನ ಮಾದರಿಯ ರಕ್ತ ಪರೀಕ್ಷಾ ಯಂತ್ರಗಳು ಹಾಗು ಇತರೆ ಯಂತ್ರಗಳಿದ್ದು ಇವುಗಳಿಂದ ರೋಗಿಗಳ ರಕ್ತ ಪರೀಕ್ಷೆ ಮಾಡಿ ನೀಡುವ ವರದಿಗಳಿಂದ ವೈದ್ಯರುಗಳಿಗೆ ರೋಗ ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಿರುತ್ತದೆ.
೨. ವಿಭಾಗದಲ್ಲಿ ಲಭ್ಯ ಸೇವೆಗಳು :
ಕಾಲೇಜು ವಿಭಾಗದಲ್ಲಿ:
- ಎಂಬಿಬಿಎಸ್, ಪ್ಯಾರ-ಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ತರಬೇತಿ.
- ಸ್ನಾತಕೋತ್ತರ ಪದವಿಯಾದ ಎಂ.ಡಿ.ಜೀವರಸಾಯನ ಶಾಸ್ತ್ರ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ತರಬೇತಿ
ಆಸ್ಪತ್ರೆಯ ಪ್ರಯೋಗಾಲಯದಲ್ಲಿ :
- ಜೀವರಸಾಯನ ಶಾಸ್ತ್ರ ಪ್ರಯೋಗಾಯದಲ್ಲಿ ಡಯೋಗ್ನಾಸ್ಟಿಕ್ ಸೇವೆಗಳು ೨೪ ಘಂಟೆಗಳ ಕಾಲ ರೋಗಿಗಳಿಗೆ ಲಭ್ಯವಿರುತ್ತದೆ.
ಆಸ್ಪತ್ರೆಯ ಜೀವರಸಾಯನ ಶಾಸ್ತ್ರ ಪ್ರಯೋಗಾಯದಲ್ಲಿ ಲಭ್ಯ ಪರೀಕ್ಷೆಗಳು:
- ಬ್ಲಡ್ ಶುಗರ್: ಎಫ್‌ಬಿಎಸ್, ಪಿಪಿಬಿಎಸ್ , ಆರ್ ಬಿ ಎಸ್, ಜಿಸಿಟಿ /ಜಿಟಿಟಿ, ಎಚ್‌ಬಿಎಒನ್‌ಸಿ
- ಲಿಪಿಡ್ ಪ್ರೊಫೈಲ್ : ಟೋಟಲ್ ಕೊಲೆಸ್ಟಾಲ್ , ಎಚ್‌ಡಿಲ್ ಕೊಲೆಸ್ಟಾಲ್, ಎಲ್‌ಡಿಲ್ ಕೊಲೆಸ್ಟಾಲ್, ಟ್ರೆಗ್ಲಿಸರೈಡ್ಸ್, ವಿಎಲ್‌ಡಿಎಲ್
- ಕಿಡ್ನಿ ಪ್ರೊಫೈಲ್: ಯೂರಿಯಾ, ಕ್ರಿಯಾಟಿನಿನ್
- ಲಿವರ್ ಫಂಕ್ಷನ್ ಪರೀಕ್ಷೆಗಳು: ಟೋಟಲ್ ಬಿಲಿರುಬಿನ್, ಡೈರೆಕ್ಟ್ ಬಿಲಿರುಬಿನ್, ಇನ್‌ಡೈರೆಕ್ಟ್ ಬಿಲಿರುಬಿನ್, ಟೋಟಲ್ ಪ್ರೋಟೀನ್, ಆಲ್‌ಬುಮಿನ್, ಗ್ಲೋಬುಲಿನ್, ಎ.ಎಲ್.ಪಿ, ಎಸ್.ಜಿ.ಪಿ.ಟಿ , ಎಸ್.ಜಿ ಒ. ಟಿ
- ಸೀರಮ್ ಎಲೆಕ್ಟ್ರೋಲೈಟ್ಸ್: ಸೋಡಿಯಮ್, ಪೊಟ್ಯಾಷಿಯಮ್, ಕ್ಲೋರೈಡ್
- ಹಾರ್ಮೋನ್‌ಗಳು : ಎಫ್ ಎಸ್ ಎಚ್, ಎಲ್ ಎಚ್, ಪ್ರೋಲ್ಯಾಕ್ಟಿನ್, ಪಿ ಟಿ ಎಚ್, ಕಾರ್ಟಿಸಾಲ್
- ವಿಟಮಿನ್ ಗಳು: ವಿಟಮಿನ್ ಡಿ, ವಿಟಮಿನ್ ಬಿ-೧೨, ಫೋಲಿಕ್ ಆಸಿಡ್.
- ಇತರೆ: ಫಾಸ್ಫರಸ್, ಯೂರಿಕ್ ಆಸಿಡ್, ಕೋಲಿನೆಸ್ಟರೇಸ್, ಟೋಟಲ್ ಕ್ಯಾಲ್ಷಿಯಮ್, ಜಿ ಜಿ ಟಿ, ಹೋಮೋಸಿಸ್ಟೀನ್, ಎಲ್ ಡಿ ಎಚ್,
- ಹೃದಯ ಸಂಬಂಧಿತ ಪರೀಕ್ಷೆ: ಸಿಕೆ-ಎಮ್ ಬಿ, ಸಿಕೆ-ಟೋಟಲ್, ಎಚ್ಎಸ್-ಟ್ರೋಪೋನಿನ್,
- ಕ್ಯಾನ್ಸರ್ ಪತ್ತೆ ಪರೀಕ್ಷೆ: ಎಎಫ್ ಪಿ, ಬಿಟಾ ಎಚ್ ಸಿ ಜಿ, ಸಿ ಇ ಎ, ಸಿ ಎ. ೧೯-೯, ಟೋಟಲ್ ಪಿ ಎಸ್ ಎ, ಸಿ ಎ. ೧೨೫
- ಔಷಧ ಪ್ರಮಾಣ ಪತ್ತೆ: ಲಿಥಿಯಮ್, ವ್ಯಾಲ್‌ಪ್ರೋಯಿಕ್‌ಆಸಿಡ್
- ಇತರೆ ದ್ರವ ಪರೀಕ್ಷೆ ಅಸೈಟಿಕ್/ಪ್ಲೂರಲ್/ಪೆರಿಟೋನಿಯಲ್: ಶುಗರ್, ಪ್ರೋಟಿನ್, ಕ್ಲೋರೈಡ್, ಮೈಕ್ರೋ ಪ್ರೋಟೀನ್
- ಕೋವಿಡ್ ರೋಗ ಪರೀಕ್ಷೆಗಳು: ಡಿ-ಡೈಮರ್, ಪ್ರೋಕ್ಯಾಲ್ಸಿಟೋನಿನ್, ಐ ಎಲ್-೬, ಕೋವಿಡ್ -೨ ಐಜಿಜಿ, ಬಿಎನ್‌ಪಿ, ಸೀರಮ್ ಲ್ಯಾಕ್ಟೇಟ್, ಹೆಚ್‌ಎಸ್-ಸಿಆರ್‌ಪಿ
- ಐರನ್ ಪ್ರೊಫೈಲ್ : ಫೆರಿಟಿನ್, ಟಿಐಬಿಸಿ,
- ಥೈರಾಯಿಢ್ ಸಂಬಂಧಿತ ಪರೀಕ್ಷೆ: ಟಿ ೩, ಟಿ ೪, ಟಿ ಎಸ್ ಎಚ್
- ಮೆದೋಜೀರಕಾಂಗ ಪರೀಕ್ಷೆ: ಸೀರಮ್ ಅಮೈಲೇಸ್, ಲೈಪೇಸ್,
- ಯೂರಿನ್ : ೨೪ ಗಂಟೆ ಕ್ರಿಯಾಟಿನಿನ್, ಆಲ್ಬ್/ಕ್ರಿಯಾಟಿನಿನ್ ರೇಶಿಯೋ, ಮೈಕ್ರೋ ಪ್ರೋಟೀನ್, ಮೈಕ್ರೋಆಲ್ಬುಮಿನ್,
ಕೇಂದ್ರೀಯ ಪ್ರಯೋಗಾಲಯ

ಕೇಂದ್ರೀಯ ಪ್ರಯೋಗಾಲಯದಲ್ಲಿ ಗುಣಮಟ್ಟದ ಖಾತ್ರಿ ಪರೀಕ್ಷೆ

೩. ಸಿಬ್ಬಂದಿ
ಬೋಧಕ ಸಿಬ್ಬಂದಿ:
ಕ್ರ ಸಂ
|
ಹೆಸರುಗಳು
|
ವಿದ್ಯಾರ್ಹತೆ
|
ಪದನಾಮ
|
೧
|
ಡಾ. ವಿಠ್ಠಲ್. ಬಿ.ಜಿ
|
ಎಂ.ಬಿ.ಬಿ.ಎಸ್, ಎಮ್.ಡಿ.
|
ಪ್ರಾಧ್ಯಾಪಕರು & ಮುಖ್ಯಸ್ಥರು
|
೨
|
ಡಾ. ಕಾಂತಯ್ಯ.
|
ಎಮ್ ಎಸ್.ಸಿ. ಪಿಹೆಚ್,ಡಿ ಬಯೋಕೆಮಿಸ್ಟ್ರಿ
|
ಸಹ ಪ್ರಾಧ್ಯಾಪಕರು
|
೩
|
ಶ್ರೀ ಶ್ಯಾಮರಾಜ ಉಡುಪ. ಟಿ.
|
ಎಂ.ಎಸ್‌ಸಿ., ಎಮ್.ಫಿಲ್ ಬಯೋಕೆಮಿಸ್ಟ್ರಿ,
|
ಸಹಾಯಕ ಪ್ರಾಧ್ಯಾಪಕರು
|
೪
|
ಡಾ. ಸ್ವಪ್ನ. ಜಿ.ಎನ್.
|
ಎಂ.ಬಿ.ಬಿ.ಎಸ್, ಎಮ್.ಡಿ.
|
ಸಹಾಯಕ ಪ್ರಾಧ್ಯಾಪಕರು
|
೫
|
ಡಾ. ಸುಮ.ಹೆಚ್.ಕೆ
|
ಎಂ.ಬಿ.ಬಿ.ಎಸ್
|
ಬೋಧಕರು
|
೬
|
ಶ್ರೀಮತಿ ಚಂದನ
|
ಎಂ.ಎಸ್‌ಸಿ. ಬಯೋಕೆಮಿಸ್ಟ್ರಿ
|
ಬೋಧಕರು
|
೭
|
ಡಾ. ಇಂದುಮತಿ ಟಿ.
|
ಎಂ.ಬಿ.ಬಿ.ಎಸ್
|
ಪಿ ಜಿ & ಬೋಧಕರು
|
೮
|
ಡಾ. ಮುಕ್ತಿಶ್ರೀ
|
ಎಂ.ಬಿ.ಬಿ.ಎಸ್
|
ಬೋಧಕರು
|
ಬೋಧಕೇತರ ಸಿಬ್ಬಂದಿ:
ಕ್ರ ಸಂ
|
ಹೆಸರುಗಳು
|
ಪದನಾಮ
|
೧
|
ಶ್ರೀ ಗಿರೀಶ್.ಬಿ
|
ಪ್ರಯೋಗಶಾಲಾ ತಾಂತ್ರಿಕಾಧಿಕಾರಿ
|
೨
|
ಶ್ರೀಮತಿ ವಿಜಯ ಡಿ.ಎಸ್
|
ಪ್ರಯೋಗಶಾಲಾ ತಾಂತ್ರಿಕಾಧಿಕಾರಿ
|
೩
|
ಶ್ರೀಮತಿ ನಿರ್ಮಲ ಎಚ್.ಎಸ್.
|
ದ್ವಿ.ದ.ಸ.
|
೪
|
ಶ್ರೀ ಜಯರಾಮ ಎಚ್. ಸಿ
|
ಪ್ರಯೋಗಶಾಲಾ ಸಹಾಯಕರು
|
ಆಸ್ಪತ್ರೆ ಪ್ರಯೋಗಾಶಾಲಾ ತಾಂತ್ರಿಕಾಧಿಕಾರಿ
ಕ್ರ ಸಂ
|
ಹೆಸರುಗಳು
|
ಪದನಾಮ
|
೧
|
ಶ್ರೀಮತಿ ಲಕ್ಷ್ಮೀ ಬಾಯಿ ಕುಮರೇಶಿ
|
ಪ್ರಯೋಗಶಾಲಾ ತಾಂತ್ರಿಕಾಧಿಕಾರಿ
|
೨
|
ಶ್ರೀಮತಿ ಲಕ್ಷ್ಮೀ ದೇವಿ
|
ಪ್ರಯೋಗಶಾಲಾ ತಾಂತ್ರಿಕಾಧಿಕಾರಿ
|
೩
|
ಶ್ರೀಮತಿ ಹೆಲನ್
|
ಪ್ರಯೋಗಶಾಲಾ ತಾಂತ್ರಿಕಾಧಿಕಾರಿ
|
೪
|
ಶ್ರೀಮತಿ ಇಟ್ಟಿಗುಡಿ ನಿರ್ಮಲ
|
ಪ್ರಯೋಗಶಾಲಾ ತಾಂತ್ರಿಕಾಧಿಕಾರಿ
|
೫
|
ಶ್ರೀ ಸಂತೋಷ್ ಕೆ ರಾಥೋಡ್
|
ಪ್ರಯೋಗಶಾಲಾ ತಾಂತ್ರಿಕಾಧಿಕಾರಿ
|
೬
|
ಶ್ರೀಮತಿ ಶಶಿಕಲಾ
|
ಪ್ರಯೋಗಶಾಲಾ ತಾಂತ್ರಿಕಾಧಿಕಾರಿ
|
೭
|
ಶ್ರೀಮತಿ ಜ್ಯೋತಿ
|
ಪ್ರಯೋಗಶಾಲಾ ತಾಂತ್ರಿಕಾಧಿಕಾರಿ
|
೮
|
ಶ್ರೀ ಹರೀಶ್ ಕುಮಾರ್
|
ಪ್ರಯೋಗಶಾಲಾ ತಾಂತ್ರಿಕಾಧಿಕಾರಿ
|
ಸಂಶೋಧನಾ ಪ್ರಕಟಣೆಗಳು:
೧. ಡಾ. ವಿಠ್ಠಲ್ ಬಿ ಜಿ, ಡಾ.ಪ್ರವೀಣ್ ಜಿ, ಡಾ.ದೀಪಕ್ ಪಿ. ಆರೋಗ್ಯವಂತ ವ್ಯಕ್ತಿಗಳ ಬಾಡಿ ಮಾಸ್ ಇಂಡೆಕ್ಸ್ ಮತ್ತು ರಕ್ತದ ಗ್ಲುಕೋಸ್ ಅಂಶ ಗಳ ನಡುವಿನ ಸಂಬಂಧದ ಅಧ್ಯಯನ. ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಡಯಾಗ್ನೋಸ್ಟಿಕ್ ರಿಸರ್ಚ್ ೨೦೧೦; ೪:೩೪೨೧- ೪.
೨. ಡಾ. ವಿಠ್ಠಲ್ ಬಿ ಜಿ, ಡಾ. ರುದ್ರೇಶ್ ಬಿ ಎಮ್ , ಡಾ. ಆಲಿಯಾ ನುಸ್ರತ್, ಡಾ.ಪ್ರಿಯದರ್ಶಿನಿ ಕೆ ಎಸ್.ಸಾಲ್ಬುಟಮಾಲ್ ಔಷಧಿಯನ್ನು ನೆಬ್ಯುಲೈಸೇಶನ್ ಮೂಲಕ ನೀಡುವಾಗ ರಕ್ತದ ಎಲೆಕ್ಟ್ರೋಲೈಟ್ ಗಳ ಬದಲಾವಣೆಯ ಅಧ್ಯಯನ. ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಡಯಾಗ್ನೋಸ್ಟಿಕ್ ರಿಸರ್ಚ್ ೨೦೧೦;೪:೩೪೬೦-೪.
೩. ಡಾ. ವಿಠ್ಠಲ್ ಬಿ ಜಿ, ಡಾ.ಪ್ರವೀಣ್ ಜಿ.ಬೊಜ್ಜಿನಿಂದ ಸಕ್ಕರೆ ಕಾಯಿಲೆ ಯಾವ ವಯಸ್ಸಿಗೆ ಬಂದೀತು? ಎಲೆಕ್ಟ್ರಾನಿಕ್ ಫಿಜಿಶಿಯನ್ ಜರ್ನಲ್ ೨೦೧೧;೩(೧):೪೦೩-೬
೪. ಡಾ. ವಿಠ್ಠಲ್ ಬಿ ಜಿ, ಡಾ.ಪ್ರವೀಣ್ ಜಿ.ಸಕ್ಕರೆ ಕಾಯಿಲೆ ರೋಗಿಗಳಲ್ಲಿ ರೋಗದ ಹಾಗೂ ಸ್ವಯಂ ಆರೈಕೆಯ ಅರಿವು ಮನೋಭಾವ ಹಾಗೂ ಆಚರಣೆಯ ಅಧ್ಯಯನ. ಎಲೆಕ್ಟ್ರಾನಿಕ್‌ಫಿಜಿಶಿಯನ್ ಜರ್ನಲ್೨೦೧೨;೪(೩):೫೫೧-೪.
೫. ಡಾ. ವಿಠ್ಠಲ್ ಬಿ ಜಿ, ಡಾ ನವೀನ್ ಕುಮಾರ್ ಜಿ.ಹೆಚ್.ಅಧಿಕ ರಕ್ತದೊತ್ತಡ ಹಾಗೂ ರಕ್ತದ ಕ್ಯಾಲ್ಸಿಯಂ ನಡುವಿನ ಸಂಬAಧದ ಅಧ್ಯಯನ.ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಾರ್ಮಕಾಲಜಿ ಅಂಡ್ ಬಯಲಾಜಿಕಲ್ ಸೈನ್ಸಸ್. ೨೦೧೪; ೫ (೨) : (ಃ) ೬೧ – ೬೬
೬. ಡಾ. ವಿಠ್ಠಲ್ ಬಿ ಜಿ, ಡಾ.ಭಾಸ್ಕರ ಕೆ, ಡಾ ನವೀನ್ ಕುಮಾರ್ ಜಿ.ಹೆಚ್. ಯೂರಿಕ್ ಆಸಿಡ್ ಹಾಗೂ ಅಧಿಕ ರಕ್ತದೊತ್ತಡ: ಯೂರಿಕ್ ಆಸಿಡ್ ಕೀಲುಗಳಿಗಿಂತ ಹೆಚ್ಚಾಗಿ ಹೃದಯವನ್ನು ಬಾಧಿಸುವುದೇ? ಇಂಟರ್ನ್ಯಾಷನಲ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ & ಹೆಲ್ತ್ ಸೈನ್ಸಸ್. ೨೦೧೪;೩(೧):೧೦೪-೧೦೯
೭. ಡಾ. ವಿಠ್ಠಲ್ ಬಿ ಜಿ, ಡಾ. ಭಾಸ್ಕರ ಕೆ, ಜೀವರಸಾಯನಶಾಸ್ತ್ರ ಕಲಿಕೆಯಲ್ಲಿ ಬೋಧನಾ ಸಾಧನಗಳ ಸೂಕ್ತ ಉಪಯೋಗ: ವಿದ್ಯಾರ್ಥಿಗಳ ದೃಷ್ಟಿಕೋನದ ಅಧ್ಯಯನ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಬೇಸಿಕ್ ಮೆಡಿಕಲ್ ಸೈನ್ಸಸ್. ೨೦೧೪;೧(೫):೬೫-೮
೮. ಡಾ. ವಿಠ್ಠಲ್ ಬಿ ಜಿ, ಡಾ.ಪ್ರಿಯದರ್ಶಿನಿ ಕೆ ಎಸ್. ಜೀವರಸಾಯನಶಾಸ್ತ್ರ ಪಠ್ಯ ಕಲಿಕೆಯಲ್ಲಿ ಬೋಧನಾ ಸಾಮಗ್ರಿಗಳು: ವಿವಿಧ ದೃಷ್ಟಿಕೋನಗಳ ಅಧ್ಯಯನ. ನ್ಯಾಷನಲ್ ಜರ್ನಲ್ ಆಫ್ ಮೆಡಿಕಲ್ ಸೈನ್ಸಸ್ ೨೦೧೪;೩(೨):೪೬-೯
೯. ಡಾ. ಪ್ರಿಯದರ್ಶಿನಿ ಕೆ ಎಸ್, ಡಾ. ವಿಠ್ಠಲ್ ಬಿ ಜಿ, ಡಾ. ವರ್ಷಾ ಮೋಹನ್.ಸ್ಥೂಲಕಾಯರಲ್ಲಿ ಹೃದಯ ಸಂಬAಧಿ ಕಾಯಿಲೆಗಳನ್ನು ಪತ್ತೆಹಚ್ಚುವಲ್ಲಿ ರಕ್ತದಲ್ಲಿನ ಕೊಬ್ಬಿನ ಅಂಶಗಳ ಅನುಪಾತದ ಉಪಯುಕ್ತತೆ. ನ್ಯಾಷನಲ್ ಜರ್ನಲ್ ಆಫ್ ಮೆಡಿಕಲ್ ಸೈನ್ಸಸ್ ೨೦೧೫; ೪(೧): ೬-೯.
೧೦. ಡಾ. ವಿಠ್ಠಲ್ ಬಿ ಜಿ, ಡಾ ಸೈಯದ್ ಜಾವಿದ್.ಜೀವರಸಾಯನಶಾಸ್ತ್ರ ಕಲಿಕೆ ಬಹು ವಿಭಾಗಿಯ ಸಂಯೋಜನೆಗೆ ಇದು ಸಕಾಲ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ & ಹೆಲ್ತ್ ಸೈನ್ಸಸ್. ೨೦೧೫;೪(೧):೮೪-೮೯
೧೧. ಡಾ ಚನ್ನವೀರಪ್ಪ ಪಿಕೆ, ಡಾ ಸಿದ್ದರಾಮ್ ಎಸ್ ಎಂ, ಡಾ ಹಾಲೇಶ್ ಬಿಆರ್, ಡಾ. ವಿಠ್ಠಲ್ ಬಿ ಜಿ, ಡಾ ಜಯಶ್ರೀ ಎನ್.ಹಿಮ್ಸ್ ಡಾಟ್ಸ್ ಸೆಂಟರ್ ನಲ್ಲಿ ಕ್ಷಯ ರೋಗಿಗಳ ಚಿಕಿತ್ಸೆಯ ಪರಿಣಾಮದ ಅಧ್ಯಯನ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಬಯಾಲಜಿ ಅಂಡ್ ಮೆಡಿಕಲ್ ರಿಸರ್ಚ್೨೦೧೧; ೨(೨): ೪೮೭- ೯.
೧೨. ಡಾ ಹಾಲೇಶ್ ಬಿಆರ್, ಡಾ ಚನ್ನವೀರಪ್ಪ ಪಿಕೆ, ಡಾ. ವಿಠ್ಠಲ್ ಬಿ ಜಿ, ಡಾ ಜಯಶ್ರೀ ಎನ್.ಮೆದುಳಿನ ರಕ್ತನಾಳಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯ ಚಿಕಿತ್ಸೆ ಹಾಗೂ ಪರಿಣಾಮಗಳ ಅಧ್ಯಯನ. ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಡಯಾಗ್ನೋಸ್ಟಿಕ್ ರಿಸರ್ಚ್ ೨೦೧೧; ೫(೩):೪೪೩ – ೭.
೧೩. ಡಾ ಚನ್ನವೀರಪ್ಪ ಪಿಕೆ, ಡಾ ಹಾಲೇಶ್ ಬಿಆರ್, ಡಾ. ವಿಠ್ಠಲ್ ಬಿ ಜಿ, ಡಾ ಜಯಶ್ರೀ ಎನ್.ಹಿಮ್ಸ್ ಐಸಿಟಿಸಿ ಕೇಂದ್ರದ ರೋಗಿಗಳ ಸೋಶಿಯೊ ಡೆಮೊಗ್ರಾಫಿಕ್ ಅಧ್ಯಯನ. ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಡಯಾಗ್ನೋಸ್ಟಿಕ್ ರಿಸರ್ಚ್ ೨೦೧೧; ೫(೩): ೪೩೦-೩.
೧೪. ಡಾ. ಕಾಂತಯ್ಯ, ಡಾ.ಗೋವಿಂದ ಸ್ವಾಮಿ ಕೆ.ಎಸ್.ಮತ್ತು ಆಕಾಶ್.ಎಸ್. ಹೆಪಟೋಮ ಪ್ರೇರಿತ ಇಲಿಗಳ ಬೆಳ್ಳುಳ್ಳಿ ಸಾರದ ಕ್ಯಾನ್ಸರ್‌ನ ವಿರೋದಕ ಪರಿಣಾಮಗಳು, ಇಂಟರ್ ನ್ಯಾಷನಲ್ ಜರ್ನಲ್ ಆಫ್ ಬಯೋಅಸ್ಸೆ ೨೦೧೩,೦೨(೧೦) ೧೨೯೩-೯೮.
೧೫. ಡಾ.ಕಾಂತಯ್ಯ, ಡಾ.ಗೋವಿಂದ ಸ್ವಾಮಿ. ಕೆಎಸ್.ಓಂ ಪ್ರಕಾಶ್ .ಕೆವಿ.ನೈಟ್ರೋಸೋ-ಆರ್ ಲವಣದ ಹೆಪಟೋಮ ಪ್ರೇರಿತ ಇಲಿಗಳ ಬೆಳ್ಳುಳ್ಳಿ ಜಲೀಯ ಸಾರದ ಕ್ಯಾನ್ರ‍್ನ ವಿರೋಧಕ ಪರಿಣಾಮಗಳು. ಇಂಟರನ್ಯಾಷಿನಲ್ ಜರ್ನಲ್ ಆಫ್ ರಿಸೆಂಟ್ ಟ್ರೆಂಡ್ಸ್ ಇನ್ ಸೈನ್ಸ್ ಮತ್ತು ಟೆಕ್ನಾಲಜಿ, ವಲ್ಯೂಮ್ ೯,ಇಶ್ಯು ೧ ೨೦೧೩/ಪುಟ೧೦೦-೦೪.
೧೬. ಕಾಸರಗೋಡು ವೆಂಕಟಕೃಷ್ಣಯ್ಯ ಡಾ.ಓಂಪ್ರಕಾಶ್, ಡಾ.ಕಾಂತಯ್ಯ, ರತಿನಸಾಮಿ ಮುತ್ತುಸಾಮಿ, ಮಠದ ಗುರುಶಾಂತಯ್ಯ. ಮಾನವ ಆಮ್ನಿಯೋಟಿಕ್ ಇಪಿಥೀಲಿಯಲ್ (ಹಚ್.ಎ.ಇ) ಕೋಶನಾಟಿ ಜೊತೆಗೆ ಸಂಪರ್ಕವನ್ನು ಸ್ಥಾಪಿಸಿ ಹಿಪ್ಪೋ ಕ್ಯಾಂಪಲ್ ಅತಿಥೆಯಕೋಶ ಟಿ.ಎಮ್.ಟಿ ಆದ ಲೆನಿನ್ ಇಲಿಯ ಮಾದರಿಯಿಂದ ಸುಪ್ರಯೂಕ್ತ ದಂತ ಹರಳಿನ ಪದರದ ಅಸಹಜ ಅತಿಥೇಯ ಪಾಚಿನಾರು ನಿಗ್ರಹಿಸುವುದು. ಇಂಟರನ್ಯಾಷಿನಲ್ ಜರ್ನಲ್ ಆಫ್ ರಿಸೆಂಟ್ ಟ್ರೆಂಢ್ಸ್ ಇನ್ ಸೈನ್ಸ್ ಮತ್ತು ಟೆಕ್ನಾಲಜಿ ವಲ್ಯೂಮ್ ೯,ಇಶ್ಯು ೨ ಡಿಸೆಂಬರ್೨೦೧೩/ಪುಟ೨೭೫-೮೦.
೧೭. ಡಾ.ಸುನಂದಮೂರ್ತಿ, ಡಾ.ಕಾಂತಯ್ಯ. ಡಾ.ಗೋವಿಂದಸ್ವಾಮಿ ಕೆಎಸ್. ಹೆಚ್ಚಿನ ಕೊಬ್ಬು ಅಧಿಕ ಕೊಲೆಸ್ಟ್ರಾಲ್ ಆಹಾರ ನೀಡಲಾದ ಇಲಿಗಳಿಗೆ ಬೆಳ್ಳುಳ್ಳಿ ಸಾರದ ಹೈಪೊಲಿಪಿಡಮಿಕ್ ಪರಿಣಾಮಗಳು ಜರ್ನಲ್ ಆಫ್ ಎವಲುಷನ್ ಆಫ್ ಮೆಡಿಕಲ್ ಮತು ಡೆಂಟಲ್ ಸೈನ್ಸಸ್ ೨೦೧೪, ವಾಲ್ಯೂಮ್ ೦೩, ಇಶ್ಯೂ ಫೆಬ್ರವರಿ೧೦, ೧೩೩೪-೩೮
೧೮. ಜೆ.ಎನ್.ನಾಯ್ಡು, ಜಿ.ಎನ್.ಸ್ವಪ್ನ, ಅಮರ್ ನಾಗೇಶ್ ಕುಮಾರ್, ಎಂ.ಕೃಷ್ಣಮ್ಮ. ಅನಿತ. ಪಾಲಿಸಿಸ್ಟಿಕ್ ಓವರಿ ಡಿಸೀಸ್‌ನಲ್ಲಿ ಹೆಚ್ಚಾದ ಇನ್ಸುಲಿನ್ ರೆಸಿಸ್ಟೆನ್ಸ್, ಡಿಸ್ಲಿಪಿಡೆಮಿಯಾ ಮತ್ತು ಆಂಟಿ ಆಕ್ಸಿಡೆಂಟ್ ವಿಟಮಿನ್‌ಗಳ ಪ್ರಾಮುಖ್ಯತೆ. ಜರ್ನಲ್ ಆಫ್ ಫ್ರೀ ರ‍್ಯಾಡಿಕಲ್ಸ್ ಮತ್ತು ಆಂಟಿ ಆಕ್ಸಿಡೆಂಟ್ಸ್ ೨೦೧೩,೩(೧):೧೭-೧೯.
೧೯. ಡಾ. ಅಭಿಜಿತ್ ಡಿ, ಡಾ.ನಂದಿನಿ ಎಂ ಡಿ, ಡಾ.ವಿಠ್ಠಲ್ ಬಿಜಿ.ಜೀವರಸಾಯನಶಾಸ್ತ್ರ ಕ್ಲಿನಿಕಲ್ ಲ್ಯಾಬ್ನ ಪರೀಕ್ಷೆಗಳಲ್ಲಿ ಸೀರಂ ಮತ್ತು ಈಡಿಟಿಎ ಪ್ಲಾಸ್ಮ ಬಳಸಿದಾಗ ಆಗುವ ಬದಲಾವಣೆಗಳ ಅಧ್ಯಯನ. ಜರ್ನಲ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ಹೆಲ್ತ್ . ೨೦೨೦;೬(೨):೪೬-೪೯
೨೦. ಡಾ. ಅಭಿಜಿತ್ ಡಿ, ಡಾ.ವಿಠ್ಠಲ್ ಬಿಜಿ.ಆಹಾರಸೇವನೆಯ ಮುನ್ನ ಹಾಗೂ ನಂತರದ ರಕ್ತದ ಕೊಬ್ಬಿನ ಅಂಶಗಳ ತುಲನಾತ್ಮಕ ಅಧ್ಯಯನ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಅಡ್ವಾನ್ಸ್ಡ್ ಬಯೋ ಕೆಮಿಸ್ಟ್ರಿ ರಿಸರ್ಚ್
೨೧. ಡಾ. ವಿಠ್ಠಲ್ ಬಿಜಿ, ಡಾ.ಮಹಾಂತೇಶ ಪಾಟೀಲ್, ಡಾ.ಅಭಿಜಿತ್ ಡಿ.ಆಹಾರಸೇವನೆಯ ಮುನ್ನ ಹಾಗೂ ನಂತರದ ರಕ್ತದ ಗ್ಲೂಕೋಸ್ ಅಂಶಗಳ ಹಾಗೂ ಗ್ಲೈಕೇಟೆಡ್ ಹಿಮೋಗ್ಲೋಬಿನ್ ಅಂಶದ ಸಂಬಂಧಗಳ ಬಗೆಗಿನ ತುಲನಾತ್ಮಕ ಅಧ್ಯಯನ.ಜರ್ನಲ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ಹೆಲ್ತ್.
ಪ್ರಸ್ತುತ ನಡೆಯುತ್ತಿರುವ ಸಂಶೋಧನೆಗಳು
೧. ಕೋವಿಡ್-೧೯ರಿಂದ ಸಾವಿಗೀಡಾದ ರೋಗಿಗಳಲ್ಲಿ ರಕ್ತಪರೀಕ್ಷೆ, ವೈಟಲ್ಸ್, ತಾಪಮಾನ ಮತ್ತು ಆಮ್ಲಜನಕ ಮಟ್ಟ ಇವುಗಳ ಬದಲಾವಣೆಯ ಅಧ್ಯಯನ. ಡಾ.ವಿಠ್ಠಲ್.ಬಿ.ಜಿ.ಡಾ.ಸ್ವಪ್ನ.ಜಿ.ಎನ್.
೨. ಪ್ರಥಮ ಎಂಬಿ.ಬಿ.ಎಸ್. ಪ್ರಾಯೋಗಿಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳ ದೃಷ್ಠಿಕೋನದ ಕುರಿತ ಪ್ರಶ್ನಾವಳಿ ಆಧಾರಿತ ಅಧ್ಯಯನ ಡಾ.ಸ್ವಪ್ನ.ಜಿ,ಎನ್. ಡಾ.ನಂದಿನಿ.ಎಂ.ಡಿ.ಡಾ.ಸುಮ ಹೆಚ್.ಕೆ.ಡಾ.ವಿಠ್ಠಲ್.ಬಿ.ಜಿ.