ಅಭಿಪ್ರಾಯ / ಸಲಹೆಗಳು

ಸಾಕಾರ ಗೊಳ್ಳುತ್ತಿರುವ ಯೋಜನೆಗಳು

ದೇಹದಾನ

ಮರಣ ನಂತರ 6 ರಿಂದ 8 ಗಂಟೆಗಳ ನಂತರ ಮೃತದೇಹವು ಕೊಳೆಯಲು ಪ್ರಾರಂಭವಾಗುತ್ತದೆ. 24 ಗಂಟೆಗಳ ನಂತರ ಮೃತದೇಹವು ನಶಿಸುತ್ತದೆ. ಮರಣಾನಂತರ ಮಣ್ಣಾಗುವ ದೇಹವನ್ನು ವೈದ್ಯಕೀಯ ಸಂಸ್ಥೆ ಕಾಲೇಜುಗಳಿಗೆ ದಾನ ಮಾಡುವುದರಿಂದ ಅನೇಕ ಲಾಭವಿದೆ. ಇದರಿಂದ ವೈದ್ಯಕೀಯ ವಿಜ್ಞಾನ ಅಭಿವೃದ್ಧಿಯಾಗುತ್ತದೆ. ಅನೇಕ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗುತ್ತದೆ. ಆಸಕ್ತರು ವೈದ್ಯಕೀಯ ಕಾಲೇಜು ಸಂಸ್ಥೆಗಳಿಗೆ ದೇಹದಾನ ಮಾಡಬಹುದು. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಉಪಯೋಗಕ್ಕಾಗಿ ಸೀಮಿತವಾಗಿರುತ್ತದೆ. ಆದ್ದರಿಂದ ಮೃತರ ಕುಟುಂಬ ವರ್ಗದವರು / ಹತ್ತಿರ ಸಂಬAಧಿಗಳು / ಸ್ನೇಹಿತರುಗಳು ಈ ವಿದ್ಯಾಲಯದ ಅಂಗರಚನಾ ಶಾಸ್ತç ವಿಭಾಗಕ್ಕೆ ಮೃತ ದೇಹವನ್ನು 8 ರಿಂದ 10 ಗಂಟೆಯೊಳಗೆ ಕಳುಹಿಸಬೇಕು. ನಾವು ರಾಸಾಯನಿಕ ವಸ್ತುವನ್ನು ಚುಚ್ಚುಮದ್ದಿನ ಮುಖಾಂತರ ಮೃತದೇಹಕ್ಕೆ ನೀಡಿ ಅದನ್ನು ಕೆಡದಂತೆ ಸಂಸ್ಕರಿಸಿ ಇಡುತ್ತೇವೆ. ಈ ವಿದ್ಯಾಲಯವು ಸ್ವಇಚ್ಛೆಯಿಂದ ದಾನ ಮಾಡುವ ಮೃತದೇಹವನ್ನು ಮಾತ್ರ ಸ್ವೀಕರಿಸುವುದೇ ಹೊರತು, ಯಾವುದೇ ಪೂರ್ವಾಪರ ಷರತ್ತಿನ ಮೇಲೆ ದೇಹದಾನವನ್ನು ಪಡೆಯುತ್ತಿಲ್ಲ. ಮೃತದೇಹವನ್ನು ಈ ವಿದ್ಯಾಲಯದ ಅಂಗರಚನಾ ಶಾಸ್ತç ವಿಭಾಗಕ್ಕೆ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9.00 ರಿಂದ 4.00 ಗಂಟೆಯೊಳಗೆ ತಂದೊಪ್ಪಿಸಬಹುದು. ಮೃತದೇಹವನ್ನು ಕಛೇರಿ ವೇಳೆ ನಂತರ ಅಂದರೆ ಸಂಜೆ 4.00 ರಿಂದ ನಂತರ ಬೆಳಗ್ಗೆ 9.00 ಗಂಟೆಯವರೆಗೆ ಈ ವಿದ್ಯಾಲಯಕ್ಕೆ ಹೊಂದಿಕೊAಡಿರುವ ಆಸ್ಪತ್ರೆಯ ವಿಧಿವೈದ್ಯಶಾಸ್ತç ವಿಭಾಗ (ಮಾರ್ಚರಿ) ಕ್ಕೆ ಒಪ್ಪಿಸುವುದು.

ಸೂಚನೆ: ಕರ್ನಾಟಕ ಅನಾಟಮಿ (ತಿದ್ದುಪಡಿ) 1957 ಮತ್ತು 1998 ನಿಯಮದಡಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಉದ್ದೇಶಕ್ಕಾಗಿ ಯಾವುದೇ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸ್ವ-ಇಚ್ಛಾ ದೇಹದಾನಕ್ಕೆ ಘನ ಸರ್ಕಾರವು ಅನುಮತಿ ನೀಡಿರುತ್ತದೆ.

 

ಮೃತ ದೇಹದೊಂದಿಗೆ ಈ ಕೆಳಗಿನ ದಾಖಲೆಗಳನ್ನು ತರುವುದು.

 1. ರಿಜಿಸರ್ಡ್ ಮೆಡಿಕಲ್ ಪ್ರಾಕ್ಟೀಷನರ್ ಇವರಿಂದ ಪಡೆದ ಮರಣ ದೃಡೀಕರಣ ಪತ್ರ (ಡೆತ್ ಸರ್ಟಿಫಿಕೇಟ್)
 2. ಮೃತದೇಹದಾನಕ್ಕೆ ನೋಂದಣಿಗಾಗಿ ಅರ್ಜಿ ಸಲ್ಲಿಸುವಾಗ ಒಪ್ಪಿಗೆ ಪತ್ರ / ಅನಾಕ್ಷೇಪಣಾ ಪತ್ರ. ನೀಡದಿÀದ್ದ ಪಕ್ಷದಲ್ಲಿ ಕುಟುಂಬ ಸದಸ್ಯರು / ಹತ್ತಿರದ ಸಂಬAಧಿಕರು / ಪೋಷಕರು ಅದನ್ನು ಈ ಸಮಯದಲ್ಲಿ ನೀಡಬೇಕು.ಆಧಾರ್ / ವೋಟರ್ ಐಡಿ
 3. ಎರಡು ಪಾಸ್ಪೋರ್ಟ್ ಫೋಟೋ

ದಯವಿಟ್ಟು ಕೆಳಕಂಡ ನಮೂನೆಗಳನ್ನು ಭರ್ತಿ ಮಾಡಿ ಲಗತ್ತಿಸುವುದು.

ನಮೂನೆ I ದೇಹದಾನಿಗಳ ಅರ್ಜಿ.

ನಮೂನೆ II ದೇಹದಾನಿಗಳ ವಿವರಗಳು.

ನಮೂನೆ III ಹತ್ತಿರ ಸಂಬAಧಿಕರ: ನ್ಯಾಯಯುತ ಪೋಷಕರ ಒಪ್ಪಿಗೆ: ಅನಾಕ್ಷೇಪಣಾ ಪತ್ರ.

 ಭರ್ತಿ ಮಾಡಿದ ಮೇಲಿನ ನಮೂನೆಗಳನ್ನು ಅಂಚೆ: ಸ್ವಹಸ್ತದ ಮೂಲಕ

 

ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು,

ಅನಾಟಮಿ ವಿಭಾಗ,

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಸನ

mob; 9448762573

 

ಇವರಿಗೆ ಸಲ್ಲಿಸುವುದು ಹಾಗೂ ಒಂದು ಪ್ರತಿಯನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದು. ಸಂಸ್ಥೆಯಿA ನೀಡಿದ ಗುರುತಿನ ಚೀಟಿ (ವ್ಯಾಲೆಟ್ ಕಾರ್ಡ್) ಯನ್ನು ತಾವು ’’ದೇಹದಾನಿ’’ ಎಂದು ಗುರುತಿಸಿಕೊಳ್ಳಲು ಸದಾ ತಮ್ಮೊಂದಿಗೆ ಇಟ್ಟುಕೊಳ್ಳುವುದು.

 

ದಾನಿಗಳು ನೇತ್ರದಾನ ಮಾಡಿದ್ದಲ್ಲಿ, ಮರಣಾನಂತರ 2 ರಿಂದ 4 ಗಂಟೆಯೊಳಗೆ ಸಂಬAಧಪಟ್ಟವರಿಗೆ ಮಾಹಿತಿ ನೀಡಿ ನೇತ್ರಗಳನ್ನು ತೆಗಿಸಬೇಕು. ನಂತರ ವಿದ್ಯಾಲಯದ ಅಂಗರಚನಾ ಶಾಸ್ತç ವಿಭಾಗಕ್ಕೆ ದೇಹವನ್ನು ತಂದೊಪ್ಪಿಸುವುದು.ನೇತ್ರದಾನಕ್ಕಾಗಿ   -  9900860044

 

ರಕ್ತದಾನ

ರಕ್ತದಾನ ಯಾರು ಬೇಕಾದ್ರೂ ಮಾಡಲು ಸಾಧ್ಯವಿದೆ. 18 ವಯೋಮಿತಿ ಮೇಲ್ಪಟ್ಟ, 50 ಕೆಜಿಗಿಂತ ಹೆಚ್ಚು ತೂಕವಿರುವ, 12-ಹಿಮೋಗ್ಲೋಬಿನ್ ಹೊಂದಿರುವ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ದಾನ ಪಡೆದ ರಕ್ತವನ್ನು 3 ತಿಂಗಳ ಕಾಲ ಸಂಗ್ರಹಿಸಿಡಬಹುದಾಗಿದೆ, ಮತ್ತು ಕ್ರಾಸ್ ಮ್ಯಾಚ್ ಮಾಡಿ ಅಗತ್ಯವಿರುವ ವ್ಯಕಿಗೆ ನೀಡಲಾಗುತ್ತೆ. ಹೆಣ್ಣುಮಕ್ಕಳು ಮಾಸಿಕ ಋತುಸ್ರಾವದ 7 ದಿನಗಳಲ್ಲಿ ಮತ್ತು ಗರ್ಭದಾರಣೆಯ ಸಂದರ್ಭದಲ್ಲಿ ರಕ್ತದಾನ ಮಾಡುವಂತಿಲ್ಲ. ಯಾವುದೇ ಚಿಕಿತ್ಸೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲೂ ರಕ್ತದಾನ ಮಾಡುವಂತಿಲ್ಲ

 

ಅಂಗಾಂಗದಾನ

ಅಂಗಾಂಗದಾನದಲ್ಲಿ  ಮೂರು ವಿಧ

ಬದುಕಿರುವಾಗ:  ರಕ್ತ, ಎಲುಬಿನ ಪೊಳ್ಳು  (ಬೋನ್ ಮ್ಯಾರೋ), ಕಿಡ್ನಿ , ತ್ವಚೆ(ಚರ್ಮ), ಯಕೃತ್, ಮೇದೋಜಿಜಿರಕ ಗ್ರಂಥಿ

ಮಿದುಳು ಸಾವು / ಬ್ರೈನ್ ಡೆತ್ ನಲ್ಲಿದ್ದಾಗ  (ಮಿದುಳು ನಿಷ್ಕ್ರಿಯವಾಗಿರುತ್ತದೆ, ಆದರೆ ಹೃದಯ  ಬಡಿತವಿದ್ದು , ಇತರೆ ಅಂಗಾಂಗ  ಜೀವಂತವಾಗಿರುತ್ತದೆ):

ಕಣ್ಣು(ನೇತ್ರ), ಕಿಡ್ನಿ(ಮೂತ್ರಕೋಶ), ಯಕೃತ್, ಸಣ್ಣ ಕರಳು (ಜಠರ), ಪ್ಯಾಂಕ್ರಿಯಾಸ್ (ಮೇದೋಜಿಜಿರಕ ಗ್ರಂಥಿ), ಶ್ವಾಸಕೋಶ, ಹೃದಯ,  ತ್ವಚೆ(ಚರ್ಮ)

ಮರಣಾನಂತರ : ದೇಹ, ಕಣ್ಣು (ನೇತ್ರ), ತ್ವಚೆ(ಚರ್ಮ),

 

 

ಸಜೀವ ದಾನ (organ donation)

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ

 1. ನೆಫ್ರೋ -ಯೂರಾಲಾಜಿ ಸಂಸ್ಥೆ, ಬೆಂಗಳೂರು 080-26700460
 2. ಯಕೃತ್ ದಾನಕಾಗಿ ಪಿ ಎಂ ಎಸ್ ಎಸ ವೈ  ಆಸ್ಪತ್ರೆ  080-26705883/ 26981800 

 

ಮಿದುಳು ಸಾವು (Brain Death/ cadaver donor)

ಜೀವಸಾರ್ಥಕತೆ 

ಹೆಲ್ತ್  & ಫ್ಯಾಮಿಲಿ  ವೆಲ್ಫೇರ್ ಡಿಪಾರ್ಟ್ಮೆಂಟ್

ಆಫೀಸ್ ಆಫ್ ದಿ ಜಾಯಿಂಟ್ ಡೈರೆಕ್ಟರ್ (ಮೆಡಿಕಲ್) ಆರೋಗ್ಯ ಸೌಧ,

6ನೇ  ಮಹಡಿ, ಲೆಪ್ರಸಿ  ಹಾಸ್ಪಿಟಲ್ ಪ್ರೆಮಿಸೆಸ್, 1 ಸ್ಟ್ ಕ್ರಾಸ್,

ಮಾಗಡಿ ರೋಡ್, ಬೆಂಗಳೂರು-560023

Jeevasarthakathe

Health and family welfare department,

office of the Joint Director ( Medical) Arogya sauda,    6th floor, Leprosy Hospital Premises 1st cross, 

Magadi Road, Bangalore-560023

ಇತ್ತೀಚಿನ ನವೀಕರಣ​ : 16-04-2021 03:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080