ಅಭಿಪ್ರಾಯ / ಸಲಹೆಗಳು

ಕನ್ನಡ ಸಂಘ

ಕನ್ನಡ ಸಂಘ, ಹಿಮ್ಸ್

ವಿದ್ಯಾರ್ಥಿಯ ಪರಿಪೂರ್ಣತೆಗೆ ಶ್ರದ್ಧಾ ನಿಷ್ಠೆಯುಳ್ಳ ಪಠ್ಯ ಅಧ್ಯಯನದ ಜೊತೆಗೆ ಮನಸ್ಸಿನ ಸರ್ವತೋಮುಖ ಬೆಳವಣಿಗೆಗೆ ಹಾಗೂ ಏಕತಾನತೆಯ ಜಾಡ್ಯವನ್ನು ಕಳೆಯಲು ಪಠ್ಯೇತರ ಚಟುವಟಿಕೆಗಳು ಅತೀ ಅವಶ್ಯಕ.

ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಕನ್ನಡ ಸಂಘವು 10/11/2011 ರಂದು ರೂಪುಗೊಂಡು ವಿವಿಧ ಕನ್ನಡಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ.

ಕನ್ನಡ ಸಂಘ 2020 ನಮ್ಮ ಸಂಸ್ಥೆಯ ಮಾನ್ಯ ನಿರ್ದೇಶಕರಾದ ಡಾ.ರವಿಕುಮಾರ್ ಬಿ.ಸಿ ರವರ ಮುಂದಾಳತ್ವದಲ್ಲಿ ಹಾಗೂ ಡಾ. ನಾಗೇಶ ಕೆ.ಎ, ಸಹ ಪ್ರಾಧ್ಯಾಪಕರು, ಅರವಳಿಕೆ ಶಾಸ್ತ್ರ ವಿಭಾಗ ಇವರ ಅಧ್ಯಕ್ಷತೆಯಲ್ಲಿ ರಚನೆಗೊಂಡಿತು. ಸಂಘದ ಪದಾಧಿಕಾರಿಗಳ ವಿವರ ಈ ಕೆಳಕಂಡಂತಿದೆ:

  1. ಡಾ. ನಾಗೇಶ ಕೆ.ಎ, ಸಹ ಪ್ರಾಧ್ಯಾಪಕರು, ಅರವಳಿಕೆ ಶಾಸ್ತ್ರ ವಿಭಾಗ–ಅಧ್ಯಕ್ಷರು
  2. ಡಾ. ರಾಮನಾಥ ಜಿ.ಪಿ, ಅರವಳಿಕೆ ಶಾಸ್ತ್ರ ವಿಭಾಗ - ಸದಸ್ಯರು
  3. ಡಾ. ಸುಧನ್ವ ಎಸ್, ಶರೀರಕ್ರಿಯಾ ಶಾಸ್ತ್ರ ವಿಭಾಗ– ಸದಸ್ಯರು
  4. ಡಾ. ಮುತ್ತುರಾಜ ಎನ್, ವೈದ್ಯಶಾಸ್ತ್ರ ವಿಭಾಗ– ಸದಸ್ಯರು
  5. ಡಾ. ವಿನಯ್‌ ಎಚ್. ಡಿ, ಶಸ್ತ್ರಚಿಕಿತ್ಸಾ ವಿಭಾಗ– ಸದಸ್ಯರು
  6. ಡಾ. ಕಾವ್ಯಶ್ರೀ ಜಿ, ದಂತಚಿಕಿತ್ಸಾ ವಿಭಾಗ–ಸದಸ್ಯರು
  7. ಶ್ರೀಮತಿ. ನಿಚಿತಾಕುಮಾರಿ, ಸಮುದಾಯ ವೈದ್ಯ ಶಾಸ್ತ್ರ ವಿಭಾಗ - ಸದಸ್ಯರು

ಇವರ ಮಾರ್ಗದರ್ಶನದಲ್ಲಿ ಕಾಲೇಜಿನ ವಿವಿಧ ವರ್ಷಗಳ ವಿದ್ಯಾರ್ಥಿಗಳು ಸದಸ್ಯರುಗಳಾಗಿರುತ್ತಾರೆ.

ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಕನ್ನಡರಾಜ್ಯೋತ್ಸವವು ಮುಖ್ಯವಾದ ಆಚರಣೆ. ಪ್ರತೀ ವರ್ಷವೂ ಹೊಸದೊಂದು ಶೀರ್ಷಿಕೆಯಡಿ ಆಚರಿಸಲ್ಪಡುವ ಕನ್ನಡ ರಾಜ್ಯೋತ್ಸವವು ಹಿಮ್ಸ್ನ ಕನ್ನಡ ಉತ್ಸವವಾಗಿದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ ಪ್ರಬಂಧ ಸ್ಪರ್ಧೆ, ಅಂತ್ಯಾಕ್ಷರಿ, ರಸಪ್ರಶ್ನೆ ಹಾಗೂ ಸಂಗೀತ ಸ್ಪರ್ಧೆ ಮುಖ್ಯವಾದವುಗಳು. ಹೀಗೆ ಹಲವು ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಸಂಸ್ಕೃತಿಯ ವೈಶಿಷ್ಠ್ಯವನ್ನು ಹಾಗೂ ಕನ್ನಡ ಭಾಷೆಯ ಮೆರಗಿನ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ವಿಶೇಷವಾಗಿ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಯಲು ಇದೊಂದು ವೇದಿಕೆಯಾಗಿದೆ.

 

 

 

 

 

 

* ಕನ್ನಡ ಸಂಘ ೨೦೨೧-೨೨

 

ಇತ್ತೀಚಿನ ನವೀಕರಣ​ : 24-05-2022 11:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080